ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 180 ಪಾಯಿಂಟ್ ಏರಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 180.70 ಪಾಯಿಂಟ್ ಏರಿಕೆ ಕಂಡು 17,651.73ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 55.75 ಪಾಯಿಂಟ್ ಏರಿಕೆ ಕಂಡು 5,296.85ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 24 ಷೇರುಗಳು ಏರಿಕೆ ಕಂಡರೆ ಉಳಿದ ಆರು ಷೇರುಗಳು ಇಳಿಕೆಯ ಹಾದಿಯಲ್ಲಿವೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.3.55ರಷ್ಟು ಏರಿಕೆ ಕಂಡರೆ, ಐಟಿ ಷೇರುಗಳು ಶೇ.1.48ರಷ್ಟು ಏರಿಕೆಯಾಗಿದೆ.