ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 155 ಪಾಯಿಂಟ್ ಏರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಇನ್ಫೋಸಿಸ್, ಭಾರ್ತಿ ಏರ್ಟೆಲ್ ಷೇರುಗಳು ಉತ್ತಮ ಏರಿಕೆಯ ಹಾದಿಯಲ್ಲಿರುವುದು ಷೇರು ಪೇಟೆಯನ್ನು ಏರಿಕೆಯ ಹಾದಿಯಲ್ಲೇ ಇರುವಂತೆ ಪ್ರೇರೇಪಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 155.69 ಪಾಯಿಂಟ್ ಏರಿಕೆ ಕಂಡು 17,807.42ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 180.70 ಪಾಯಿಂಟ್ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 41.95 ಪಾಯಿಂಟ್ ಏರಿಕೆ ಕಂಡು 5,338.80ಕ್ಕೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.72, ಇನ್ಫೋಸಿಸ್ ಟೆಕ್ನಾಲಜಿ ಶೇ.1.39, ಭಾರ್ತಿ ಏರ್ಟೆಲ್ ಶೇ.5.36ರಷ್ಟು ಏರಿಕೆ ಕಂಡಿದೆ.

ಇದೇ ವೇಳೆ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.69ರಷ್ಟು ಏರಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಕೂಡಾ ಉತ್ತಮ ಏರಿಕೆ ಕಂಡಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.20ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ