ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಟೆಲಿಕಾಂ ಷೇರುಗಳ ಪುಟಿತ, ಷೇರುಪೇಟೆಯಲ್ಲಿ ಏರಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 182 ಪಾಯಿಂಟ್ ಏರಿಕೆ ಕಂಡಿದೆ. ಟೆಲಿಕಾಂ ವಲಯದ ಷೇರುಗಳು ಉತ್ತಮ ಏರಿಕೆ ಕಂಡಿದ್ದರ ಫಲವಾಗಿ ಷೇರು ಮಾರುಕಟ್ಟೆ ಚಿಗಿತುಕೊಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 181.81 ಪಾಯಿಂಟ್ ಅಂದರೆ ಶೇ.1ರಷ್ಟು ಏರಿಕೆ ಕಂಡು 17,833.54ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.1.04ರಷ್ಟು ಏರಿಕೆಯಾಗಿ 5,352.10ಕ್ಕೆ ತಲುಪಿದೆ.

ಟೆಲಿಕಾಂ ಷೇರುಗಳು ಉತ್ತಮ ಏರಿಕೆ ಕಂಡಿದ್ದು ಭಾರ್ತಿ ಏರ್ಟೆಲ್ ಶೇ.10ರಷ್ಟು ಏರಿದೆ. ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.2.82, ರಿಲಯನ್ಸ್ ಇಂಡಸ್ಟ್ರೀಸ್ ಶೇ.1.63ರಷ್ಟು ಏರಿದೆ.

ರಿಯಾಲ್ಟಿ ದೈತ್ಯ ಡಿಎಲ್‌ಎಫ್ ಶೇ.4.73ರಷ್ಟು ಏರಿಕೆ ಕಂಡರೆ ಮೆಟಲ್ ಷೇರುಗಳೂ ಏರಿಕೆ ಕಂಡಿವೆ. ಹಿಂಡಲ್ಕೋ ಶೇ.2.52ರಷ್ಟು ಚೇತರಿಸಿದೆ. ಸ್ಟೆರ್ಲೈಟ್ ಇಂಡಸ್ಟ್ರೀಸ್ ಶೇ.1.5, ಟಾಟಾ ಸ್ಟೀಲ್ ಶೇ.2.4, ಜಿಂದಾಲ್ ಸ್ಟೀಲ್ ಶೇ.1.5ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ