ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್: ವಾರದಲ್ಲಿ ಉತ್ತಮ ಏರಿಕೆ, ಷೇರುಗಳಿಗೆ ಬಲ (Bombay Stock Exchange | Sensex | Nifty)
Bookmark and Share Feedback Print
 
ಈ ವಾರದಲ್ಲಿ ಮುಂಬೈ ಷೇರು ಸೂಚ್ಯಂಕ ಉತ್ತಮ ಏರಿಕೆ ಕಂಡಿದ್ದು 373 ಪಾಯಿಂಟ್ ಜಿಗಿದೆದ್ದಿದೆ. ಐಎಂಎಫ್ ಕೂಡಾ ಭಾರತದ ಅಭಿವೃದ್ಧಿ ದರವನ್ನು ಶೇ.9.5ರಷ್ಟು ಎಂದು ಪ್ರಕಟಿಸಿರುವುದು ಈ ಏರಿಕೆಗೆ ಮತ್ತಷ್ಟು ಬಲ ತಂದಿದೆ.

ಬಿಎಸ್ಇ 30 ಷೇರು ಸೂಚ್ಯಂಕ 372.59 ಪಾಯಿಂಟ್ ಅಂದರೆ ಶೇ.2.13ರಷ್ಟು ಈ ವಾರ ಏರಿಕೆಯಾಗಿ 17,833.54ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಈ ವಾರದಲ್ಲಿ 115.35 ಪಾಯಿಂಟ್ ಅಂದರೆ ಶೇ.2.20ರಷ್ಟು ಏರಿಕೆಯಾಗಿ 5,352.45ಕ್ಕೆ ತಲುಪಿದೆ.

ಬಿಎಸ್ಇ ಟೆಕ್ನಾಲಜಿ ವಲಯದ ಷೇರುಗಳು 186 ಪಾಯಿಂಟ್ ಅಂದರೆ ಶೇ.5.76ರಷ್ಟು ಏರಿದೆ. ಬಿಎಸ್ಇ ರಿಯಾಲ್ಟಿ ವಲಯ ಶೇ.4.08ರಷ್ಟು ಏರಿದರೆ, ಮೆಟಲ್ ವಲಯದ ಷೇರುಗಳು ಶೇ.3.17ರಷ್ಟು ಏರಿದೆ.

ಇನ್ಫೋಸಿಸ್ ಟೆಕ್ನಾಲಜಿ ಷೇರುಗಳು ವಾರದಲ್ಲಿ ಶೇ.5.24ರಷ್ಟು ಏರಿಕೆಯಾಗಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಶೇ.6, ಎಚ್ಡಿಎಫ್ಸಿ ಶೇ.4.71, ಡಿಎಲ್ಎಫ್ ಶೇ.4.75, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.4.57, ಟಾಟಾ ಸ್ಟೀಲ್ ಶೇ.4.44, ಸ್ಟೆರ್‌ಲೈಟ್ ಶೇ.4.29ರಷ್ಟು ವಾರದಲ್ಲಿ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ