ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 18 ಸಾವಿರಕ್ಕಿಂತಲೂ ಭರ್ಜರಿ ಏರಿದ ಷೇರು ಸೂಚ್ಯಂಕ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 176 ಪಾಯಿಂಟ್ ಏರಿಕೆ ಕಂಡು 18,000ಕ್ಕಿಂತಲೂ ದಾಟಿ ಮುನ್ನುಗ್ಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 176.53 ಪಾಯಿಂಟ್ ಅಂದರೆ ಶೇ.0.98ರಷ್ಟು ಏರಿಕೆ ಕಂಡು 18,010.07ಕ್ಕೆ ತಲುಪಿದೆ. ಈ ಮಟ್ಟಿನ ಏರಿಕೆ 2010ರ ಏಪ್ರಿಲ್ 7ರಂದು ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 50.25 ಪಾಯಿಂಟ್ ಅಂದರೆ ಶೇ.0.93ರಷ್ಟು ಏರಿಕೆ ಕಂಡು 5,402.70ಕ್ಕೆ ತಲುಪಿದೆ.

ಐಟಿ, ಮೆಟಲ್, ರಿಯಾಲ್ಟಿ ಷೇರುಗಳು ಉತ್ತಮ ಏರಿಕೆ ಕಾಣುತ್ತಿದ್ದು, ಕೊಳ್ಳುವಿಕೆಯನ್ನು ಹೆಚ್ಚಿಸಿದೆ.

ಏರಿಕೆ ಕಂಡ ಷೇರುಗಳ ಪೈಕಿ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.1.05ರಷ್ಟು ಏರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.0.95, ಡಿಎಲ್ಎಫ್ ಲಿಮಿಟೆಡ್ ಶೇ.2.08, ಟಾಟಾ ಸ್ಟೀಲ್ ಶೇ.1.13, ಸ್ಟೆರ್ಲೈಟ್ ಶೇ.2.45ರಷ್ಟು ಏರಿಕೆಯಾಗಿದೆ.

ಏಷ್ಯನ್ ಷೇರು ಮಾರುಕಟ್ಟೆ ಸೂಚ್ಯಂಕವೂ ಉತ್ತಮ ಏರಿಕೆ ಕಂಡಿದೆ. ಹಾಂಗ್ ಕಾಂಗ್, ಚೈನಾ, ತೈವಾನ್, ಸಿಂಗಾಪುರ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಷೇರುಗಳು ಶೇ.0.07ರಿಂದ ಶೇ.0.81ರವರೆಗೆ ಏರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ