ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಉತ್ತಮ ಏರಿಕೆ ದಾಖಲಿಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 104 ಪಾಯಿಂಟ್ ಏರಿಕೆ ಕಂಡಿದ್ದು, ದಿನದಲ್ಲಿ 18,000ಕ್ಕಿಂತಲೂ ಏರಿಕೆ ಕಂಡು ಬಹುಕಾಲದ ನಂತರ ಉತ್ತಮ ಏರುಗತಿಯನ್ನು ದಾಖಲಿಸಿತು.

ಬಿಎಸ್ಇ 30 ಷೇರು ಸೂಚ್ಯಂಕ 103.66 ಪಾಯಿಂಟ್ ಏರಿಕೆ ಕಂಡು 17,937.20ಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 30.55 ಪಾಯಿಂಟ್ ಏರಿಕೆ ದಾಖಲಿಸಿ 5,383.00ಗೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 17 ಷೇರುಗಳು ಏರಿಕೆಯಾದರೆ, ಉಳಿದ 13 ಷೇರುಗಳು ಇಳಿಕೆಯಾಗಿವೆ. ರಿಯಾಲ್ಟಿ ವಲಯದ ಷೇರು ಶೇ.2.24ರಷ್ಟು ಏರಿದರೆ, ಬ್ಯಾಂಕಿಂಗ್ ಷೇರು ಶೇ.1.34ರಷ್ಟು ಚೇತರಿಸಿದೆ. ಐಟಿ ಷೇರುಗಳು ಶೇ.1.26ರಷ್ಟು ಏರಿಕೆ ಕಂಡಿವೆ.

ಐಟಿ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ ಉತ್ತಮ ಏರಿಕೆ ದಾಖಲಿಸಿದ್ದು 23.05 ರೂಪಾಯಿ ಹೆಚ್ಚಿದೆ. ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ 50.55 ರೂಪಾಯಿ ಏರಿದೆ. ಲಾರ್ಸೆನ್ ಅಂಡ್ ಟರ್ಬೋ 6.45 ರೂ, ಐಡಿಯಾ ಸೆಲ್ಯುಲರ್ 70.30 ರೂಪಾಯಿ ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ