ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಇನ್ಫೋಸಿಸ್ ಲಾಭ ಕುಸಿತ, ಷೇರುಪೇಟೆಯಲ್ಲಿ ಇಳಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 46 ಪಾಯಿಂಟ್ ಇಳಿಕೆ ಕಂಡಿದೆ. ಐಟಿ ದೈತ್ಯ ಇನ್ಫೋಸಿಸ್ ಶೇ.2.42ರಷ್ಟು ನಿವ್ವಳ ಲಾಭ ಕುಸಿತದ ವರದಿ ಪ್ರಕಟಿಸುತ್ತಿದ್ದಂತೆ, ಷೇರು ಮಾರುಕಟ್ಟೆ ಕುಸಿತದೆಡೆಗೆ ಮುಖ ಮಾಡಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ಇದಕ್ಕೂ ಮೊದಲ ಮೂರು ವಹಿವಾಟುಗಳಲ್ಲಿ 465 ಪಾಯಿಂಟ್ ಏರಿಕೆ ಕಂಡಿತ್ತು. ಆದರೆ ದಿನದಾರಂಭದಲ್ಲಿ 46.53 ಪಾಯಿಂಟ್ ಅಂದರೆ ಶೇ.0.26ರಷ್ಟು ಕುಸಿತ ಕಂಡು 17,890.67ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 11.60 ಪಾಯಿಂಟ್ ಅಂದರೆ ಶೇ.0.22ರಷ್ಟು ಇಳಿಕೆ ಕಂಡು 5,371.40ಕ್ಕೆ ತಲುಪಿದೆ.

ಐಟಿ ಷೇರುಗಳು ಪ್ರಮುಖವಾಗಿ ಇಳಿಕೆ ಕಂಡಿದ್ದು, ಇವುಗಳ ಪೈಕಿ ಇನ್ಫೋಸಿಸ್ ಷೇರು ಶೇ.2.23ರಷ್ಟು ಇಳಿಕೆ ಕಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶೇ.2.19ರಷ್ಟು ಕುಸಿದಿದೆ.

ವಿಪ್ರೋ ಶೇ.1.62, ಐಸಿಐಸಿಐ ಬ್ಯಾಂಕ್ ಶೇ.0.24, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.77, ಎಸಿಸಿ ಶೇ.0.21ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ