ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ರಿಲಯನ್ಸ್ ಷೇರು ಏರಿಕೆ; ಷೇರು ಮಾರುಕಟ್ಟೆಗೆ ಕೊಂಚ ಬಲ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 48 ಪಾಯಿಂಟ್ ಏರಿಕೆಯಾಗಿದೆ. ಬೆಳಗ್ಗಿನ ವಹಿವಾಟಿನಲ್ಲಿ ಕೊಂಚ ಕುಸಿತ ಕಂಡಿತ್ತು.

ಬಿಎಸ್ಇ 30 ಷೇರು ಸೂಚ್ಯಂಕ 48.70 ಪಾಯಿಂಟ್ ಏರಿಕೆ ಕಂಡು 17,985.90ಕ್ಕೆ ತಲುಪಿದೆ. ಒಂದೆಡೆ ಐಟಿ ದೈತ್ಯ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ಶೇ.2ರಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ ಕುಸಿತ ಕಂಡರೂ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಉತ್ತಮ ಏರಿಕೆಯಿಂದಾಗಿ ಷೇರುಪೇಟೆಗೆ ಬಲ ಬಂದಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 17.65 ಪಾಯಿಂಟ್ ಏರಿಕೆ ಕಂಡು 5,400.65ಕ್ಕೆ ತಲುಪಿದೆ.

ಐಟಿ ದೈತ್ಯ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ಶೇ.2ರಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ಇನ್ಫೋಸಿಸ್ ಷೇರು ಶೇ.2.4ರಷ್ಟು ಕುಸಿತ ಕಂಡಿದೆ. ರಿಯಾಲ್ಟಿ, ಗ್ರಾಹಕ ಸ್ನೇಹಿ ವಸ್ತುಗಳ ಷೇರು ವಲಯದಲ್ಲಿ ಚೇತರಿಕೆ ಕಂಡು ಬಂದಿದೆ.

ಯುರೋಪಿಯನ್ ಷೇರು ಮಾರುಕಟ್ಟೆ ಉತ್ತಮ ಏರಿಕೆ ಕಂಡಿದೆ. ಬಿಎಸ್ಇ 30 ಷೇರುಗಳ ಪೈಕಿ 17 ಷೇರುಗಳು ಏರಿಕೆ ಕಂಡರೆ, 12 ಷೇರುಗಳು ಇಳಿಕೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ