ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಎರಡು ವರ್ಷದಲ್ಲೇ ಗರಿಷ್ಟ ಮಟ್ಟ ತಲುಪಿದ ಷೇರುಪೇಟೆ! (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 181 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 181.32 ಪಾಯಿಂಟ್ ಅಂದರೆ ಶೇ.1ರಷ್ಟು ಏರಿಕೆ ಕಂಡು 18,167.22ಕ್ಕೆ ತಲುಪಿದೆ. ಕಳೆದ 2008ರ ಫೆಬ್ರವರಿ ತಿಂಗಳ ನಂತರ ಇದು ಗರಿಷ್ಟ ಮಟ್ಟವಾಗಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 52.80 ಪಾಯಿಂಟ್ ಅಂದರೆ ಶೇ.0.97ರಷ್ಟು ಏರಿಕೆ ಕಂಡು 5,453.45ಕ್ಕೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು ಏರುಗತಿಯ ಹಾದಿ ಹಿಡಿದಿದ್ದು ಶೇ.0.60ಯಷ್ಟು ಏರಿಕೆ ಕಂಡಿದೆ. ಡಿಎಲ್ಎಫ್ ಲಿಮಿಟೆಡ್ ಶೇ.2.38, ಎಚ್ಡಿಎಫ್ಸಿ ಲಿಮಿಟೆಡ್ ಶೇ.1.66, ಎಚ್ಡಿಎಫ್ಸಿ ಬ್ಯಾಂಕ್ ಶೇ.1.69, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.1.51, ಐಸಿಐಸಿಐ ಬ್ಯಾಂಕ್ ಶೇ.0.99ರಷ್ಟು ಏರಿಕೆಯಾಗಿದೆ.

ಇದೇ ವೇಳೆ ಹಾಂಗ್ ಕಾಂಗ್ ಷೇರುಪೇಟೆ ಶೇ.1.03ರಷ್ಟು ಏರಿದೆ. ಜಪಾನಿನ ನಿಕ್ಕಿ ಶೇ.2.65ರಷ್ಟು ಚೇತರಿಸಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.44ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ