ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 48 ಪಾಯಿಂಟ್ ಕೆಳಗಿಳಿದಿದೆ.
ಬಿಎಸ್ಇ 30 ಷೇರು ಸೂಚ್ಯಂಕ 47.17 ಪಾಯಿಂಟ್ ಇಳಿಕೆ ಕಂಡು 17,938.16ಕ್ಕೆ ತಲುಪಿದೆ. ಇದಕ್ಕೂ ಮೊದಲ ನಾಲ್ಕು ವಹಿವಾಟಿನಲ್ಲಿ 515 ಪಾಯಿಂಟ್ ಏರಿಕೆಯಾಗಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 14.50 ಪಾಯಿಂಟ್ ಇಳಿಕೆ ಕಂಡು 5,386.15ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 22 ಷೇರುಗಲು ಇಳಿಕೆ ಕಂಡಿದ್ದು, ಉಳಿದವು ಏರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 5.70 ರೂಪಾಯಿ ಇಳಿಕೆ ಕಂಡರೆ, ಇನ್ಫೋಸಿಸ್ ಟೆಕ್ನಾಲಜೀಸ್ 53 ರೂ ಇಳಿಕೆಯಾಗಿದೆ. ಆದರೆ ಎಲ್ಎಂಡ್ಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಏರಿವೆ.