ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಮುಖವಾದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನ ವೇಳೆಗೆ 29 ಪಾಯಿಂಟ್ ಕುಸಿದಿದೆ.

ಬಿಎಸ್ಇ 30 ಷೇರು ಸೂಚ್ಯಂಕ 28.70 ಪಾಯಿಂಟ್ ಇಳಿಕೆ ಕಂಡು 17,909.46ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 7.40 ಪಾಯಿಂಟ್ ಇಳಿಕೆ ಕಂಡು 5,378.75 ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 14 ಷೇರುಗಳು ಏರಿಕೆ ಕಂಡರೆ, 16 ಷೇರುಗಳು ಇಳಿಕೆಯತ್ತ ಸಾಗಿದೆ.

ಚೀನಾದ ರಾಷ್ಟ್ರೀಯ ಆರ್ಥಿಕ ಅಭಿವೃದ್ಧಿ ಶೇ.11.9ರಿಂದ ಶೇ.10.3ಕ್ಕೆ ಇಳಿಕೆಯಾದ ಕಾರಣದಿಂದಾಗಿ ಇದು ನೇರವಾಗಿ ಷೇರು ಮಾರುಕಟ್ಟೆ ಮೇಲೆ ಹೊಡೆತ ಬಿದ್ದಿದೆ. ಇದರಿಂದ ಚೀನಾ ಷೇರುಪೇಟೆ ಇಳಿಕೆಯತ್ತ ಸಾಗಿದೆ.

ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ 3.90 ರೂಪಾಯಿ ಏರಿಕೆಯಾಗಿದೆ. ಇನ್ಫೋಸಿಸ್ ಟೆಕ್ನಾಲಜೀಸ್ 16.65 ರೂಪಾಯಿ ಚೇತರಿಸಿದೆ. ಟಾಟಾ ಪವರ್, ಟಾಟಾ ಮೋಟಾರ್ಸ್, ಎಸಿಸಿ ಲಿಮಿಟೆಡ್ ಮತ್ತಿತರ ಷೇರುಗಳು ಏರಿಕೆಯಾಗಿರುವುದರಿಂದ ಷೇರು ಪೇಟೆ ಭಾರೀ ಕುಸಿತದಿಂದ ಪಾರಾಗಿದ್ದು, ಅಲ್ಪ ಮಟ್ಟಿನ ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ