ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಟಿಸಿಎಸ್ ಭರ್ಜರಿ ಏರಿಕೆ; ಕೊಂಚ ಚೇತರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಕೊಂಚ ಚೇತರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 40.85 ಪಾಯಿಂಟ್ ಅಂದರೆ ಶೇ.0.22ರಷ್ಟು ಏರಿಕೆ ಕಂಡು 17,950.31ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟುಗಳಲ್ಲಿ 75 ಪಾಯಿಂಟ್ ಇಳಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 10.35 ಪಾಯಿಂಟ್ ಅಂದರೆ ಶೇ.0.19ರಷ್ಟು ಏರಿಕೆ ಕಂಡು 5,389.10ಕ್ಕೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ ಟಿಸಿಎಸ್ ಶೇ.4ರಷ್ಟು ಉತ್ತಮ ಏರಿಕೆ ಕಂಡಿದ್ದು ಷೇರುಪೇಟೆಯನ್ನು ಏರುಗತಿಯತ್ತ ಕೊಂಡೊಯ್ದಿದೆ. ಐಸಿಐಸಿಐ ಬ್ಯಾಂಕ್ ಶೇ.1.10ಯಷ್ಟು ಏರಿಕೆ ಕಂಡರೆ, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.76, ರಿಲಯನ್ಸ್ ಇನ್‌ಫ್ರಾ ಶೇ.0.23, ಟಾಟಾ ಮೋಟಾರ್ಸ್ ಶೇ.0.23, ಟಾಟಾ ಸ್ಟೀಲ್ ಶೇ.0.72, ವಿಪ್ರೋ ಶೇ.1.37ರಷ್ಟು ಏರಿದೆ.

ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.76ರಷ್ಟು ಏರಿಕೆಯಾಗಿದೆ. ಜಪಾನೀ ಷೇರು ನಿಕ್ಕಿ ಶೇ.0.35ರಷ್ಟು ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ