ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಏರುಗತಿಯತ್ತ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 46 ಪಾಯಿಂಟ್ ಏರಿಕೆ ಕಂಡಿದೆ. ಐಟಿ ದೈತ್ಯ ಟಿಸಿಎಸ್ ಷೇರು ಏರಿಕೆಯಿಂದಾಗಿ ಷೇರುಪೇಟೆಗೆ ಕೊಂಚ ಬಲ ಬಂದಿದೆ.

ಬಿಎಸ್ಇ 30 ಷೇರು ಸೂಚ್ಯಂಕ 46.36 ಪಾಯಿಂಟ್ ಏರಿಕೆ ಕಂಡು 17,955.82ಕ್ಕೆ ತಲುಪಿದೆ. ಬಿಎಸ್ಇ 30 ಷೇರುಗಳ ಪೈಕಿ 17 ಷೇರುಗಳು ಏರಿಕೆ ಕಂಡು 13 ಷೇರುಗಳು ಇಳಿಕೆಯಾಗಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 15.15 ಪಾಯಿಂಟ್ ಏರಿಕೆ ಕಂಡು 5,393.90ಕ್ಕೆ ತಲುಪಿದೆ.

ಟಿಸಿಎಸ್ ತನ್ನ ಅಂದಾಜಿಗಿಂತಲೂ ಹೆಚ್ಚೂ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಟಿಸಿಎಸ್ ಷೇರು ಭರ್ಜರಿಯಾಗಿ ಶೇ.6.1ರಷ್ಟು ಏರಿಕೆಯಾಗಿದೆ. ಇದೇ ವೇಳೆ ಇನ್ಫೋಸಿಸ್, ಎಚ್ಡಿಎಫ್ಸಿ ಲಿಮಿಟೆಡ್ ಷೇರುಗಳು ಮಾತ್ರ ಷೇರುಪೇಟೆಯನ್ನು ಮೇಲೆತ್ತಲು ವಿಫಲವಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ