ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ ಭಾರೀ ಏರಿಳಿಕೆ ದಾಖಲಿಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಈ ವಾರದಲ್ಲಿ 122 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ವಾರದಲ್ಲಿ ಉತ್ತಮ ಏರಿಳಿತಗಳನ್ನು ಕಂಡು ಮಧ್ಯಭಾಗದಲ್ಲಿ 18,000ದ ಗಡಿ ದಾಟಿತ್ತು. ಅಂತಿಮವಾಗಿ 122.28 ಪಾಯಿಂಟ್ ಅಂದರೆ ಶೇ.0.69ರಷ್ಟು ಏರಿಕೆ ಕಂಡಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ವಾರಾಂತ್ಯದಲ್ಲಿ 5,393.90ಕ್ಕೆ ಅಂತ್ಯವಾಿದ್ದು. ಇದಕ್ಕೂ ಮೊದಲು ಉತ್ತಮ ಏರಿಳಿತಗಳನ್ನು ದಾಖಲಿಸಿ 5,454ರ ಗರಿಷ್ಟ ಮಟ್ಟವನ್ನೂ ತಲುಪಿತ್ತು.

ವಾರದಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳ ಪೈಕಿ ರಿಯಾಲ್ಟಿ ಷೇರುಗಳು ಶೇ.6.04ರಷ್ಟು ಏರಿಕೆ ಕಂಡಿದೆ. ಬ್ಯಾಂಕಿಂಗ್ ಷೇರುಗಳು ಶೇ.3.03ರಷ್ಟು ಏರಿದೆ.

ವಾರದಲ್ಲಿ ವಿಶೇಷವೆಂದರೆ ಟಿಸಿಎಸ್ ಭರ್ಜರಿ ದಾಖಲೆಯ ಏರಿಕೆ ಕಂಡು ಶೇ.24.25ರಷ್ಟು ಏರಿದೆ. ಐಸಿಐಸಿಐ ಬ್ಯಾಂಕ್ ಶೇ.3.54, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.3.05, ಜಯಪ್ರಕಾಶ್ ಅಸೋಸಿಯೇಟ್ಸ್ ಶೇ.3.98, ಎಲ್ಅಂಡ್‌ಟಿ ಶೇ.2.84, ಒಎನ್‌ಜಿಸಿ ಶೇ.2.99, ಎಸಿಸಿ ಶೇ.2.86ರಷ್ಟು ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ