ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 100 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 100 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 99.42 ಪಾಯಿಂಟ್ ಅಂದರೆ ಶೇ.0.55ರಷ್ಟು ಇಳಿಕೆ ಕಂಡು 17,856.40ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 46.36 ಪಾಯಿಂಟ್ ಏರಿಕೆಯಾಗಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 32.40 ಪಾಯಿಂಟ್ ಅಂದರೆ ಶೇ.0.60ರಷ್ಟು ಇಳಿಕೆ ಕಂಡು 5,361.50ಕ್ಕೆ ತಲುಪಿದೆ.

ಐಟಿ, ರಿಯಾಲ್ಟಿ, ಬ್ಯಾಂಕಿಂಗ್, ಮೆಟಲ್, ಆಯಿಲ್ ಅಂಡ್ ಗ್ಯಾಸ್ ಷೇರುಗಳ್ಲಲಿ ಮಾರಾಟದ ಒತ್ತಡ ಹೆಚ್ಚಿದ್ದು ಶೇ.1.14ರವರೆಗೆ ಕುಸಿದಿದೆ.

ಇಳಿಕೆ ಕಂಡ ಷೇರುಗಳ ಪೈಕಿ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.1.20, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.29ಸ ಎಸ್‌ಬಿಐ ಶೇ.0.41, ಐಸಿಐಸಿಐ ಬ್ಯಾಂಕ್ ಶೇ.1.23, ಸ್ಟೈರ್ಲೈಟ್ ಶೇ.1.17, ಟಾಟಾ ಸ್ಟೀಲ್ ಶೇ.0.45, ಡಿಎಲ್ಎಫ್ ಶೇ.1.72ರಷ್ಟು ಕುಸಿದಿವೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಷೇರು ಮಾರುಕಟ್ಟೆ ಶೇ.0.79ರಷ್ಟು ಕುಸಿದರೆ, ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.2.52ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ