ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 50 ಪಾಯಿಂಟ್ ಕುಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 50 ಪಾಯಿಂಟ್ ಕೆಳಗಿಳಿದಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 50.28 ಪಾಯಿಂಟ್ ಇಳಿಕೆ ಕಂಡು 17,878.14ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 18.45 ಪಾಯಿಂಟ್ ಇಳಿಕೆ ಕಂಡು 5,368ಕ್ಕೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ 3.35 ರೂಪಾಯಿ ಇಳಿದರೆ, ಇನ್ಫೋಸಿಸ್ ಟೆಕ್ನಾಲಜೀಸ್ 12.70 ರೂಪಾಯಿ ಇಳಿಕೆಯಾಗಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ 37.70 ರೂ ಕುಸಿದಿದೆ.

ಏರಿಕೆ ಕಂಡ ಷೇರುಗಳ ಪೈಕಿ ಎಲ್ಎಂಡ್‌ಟಿ 10.10 ರೂಪಾಯಿ, ಟಾಟಾ ಕನ್ಸಲ್ಟೆನ್ಸಿ 3.20, ವಿಪ್ರೋ 3.75 ರೂಪಾಯಿ, ಸ್ಟೆರ್ಲೈಟ್ ಇಂಡಸ್ಟ್ರೀಸ್ 2.50 ರೂ ಚೇತರಿಕೆ ಕಂಡಿದೆ.

ಬಿಎಸ್ಇ 30 ಷೇರುಗಳ ಪೈಕಿ 20 ಷೇರುಗಳು ಇಳಿಕೆ ಕಂಡರೆ ಉಳಿದ 10 ಷೇರುಗಳು ಏರಿಕೆ ಕಂಡಿವೆ.

ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಶೇ.1.15ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ