ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಕೊಂಚ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 105 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 105.35 ಪಾಯಿಂಟ್ ಏರಿಕೆ ಕಂಡು 17,983.49ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 50.28 ಪಾಯಿಂಟ್ ಕುಸಿದಿತ್ತು.

ಆಟೋ, ಮೆಟಲ್, ರಿಯಾಲ್ಟಿ, ಕ್ಯಾಪಿಟಲ್ ಗೂಡ್ಸ್, ಪವರ್ ಷೇರುಗಳು ಶೇ.1.32ರವರೆಗೆ ಏರಿಕೆ ಕಂಡಿವೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 32.30 ಪಾಯಿಂಟ್ ಅಂದರೆ ಶೇ.0.60ಯಷ್ಟು ಏರಿಕೆ ಕಂಡು 5,400.30ಕ್ಕೆ ತಲುಪಿದೆ.

ಆಟೋ ಷೇರುಗಳ ಪೈಕಿ ಮಾರುತಿ ಸುಝುಕಿ ಶೇ.0.84ರಷ್ಟು ಏರಿದರೆ, ಹೀರೋ ಹೊಡಾ ಶೇ.0.02, ಟಾಟಾ ಮೋಟಾರ್ಸ್ ಶೇ.1.18, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.1.82ರಷ್ಟು ಏರಿಕೆಯಾಗಿದೆ.

ಇತರ ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.62, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.0.53, ಇನ್ಫೋಸಿಸ್ ಶೇ.0.39, ಡಿಎಲ್ಎಫ್ ಶೇ.0.40, ಹಿಂಡಲ್ಕೋ ಶೇ.0.82, ಟಾಟಾ ಸ್ಟೀಲ್ ಶೇ.1.04, ಸ್ಟೆರ್ಲೈಟ್ ಶೇ.1.60ಯಷ್ಟು ಏರಿಕೆಯಾಗಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ ಶೇ.0.57ರಷ್ಟು ಏರಿಕೆಯಾಗಿದೆ. ಜಪಾನೀ ಷೇರು ನಿಕ್ಕಿ ಶೇ.1.11ರಷ್ಟು ಚೇತರಿಸಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.74ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ