ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 124 ಪಾಯಿಂಟ್ ಮತ್ತೆ ಚಿಗಿತುಕೊಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 124.41 ಪಾಯಿಂಟ್ ಏರಿಕೆ ಕಂಡು 18,237.56ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 135 ಪಾಯಿಂಟ್ ಏರಿಕೆ ಕಂಡು 18,000ಕ್ಕಿಂತಲೂ ಮೇಲೆ ನೆಗೆದಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 35.55 ಪಾಯಿಂಟ್ ಏರಿಕೆ ಕಂಡು 5,477.50ಕ್ಕೆ ತಲುಪಿದೆ.
ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.20ಯಷ್ಟು ಏರಿಕೆಯಾಗಿದ್ದು, ಇನ್ಫೋಸಿಸ್ ಟೆಕ್ನಾಲಜಿ ಶೇ.0.61, ವಿಪ್ರೋ ಶೇ.2.51ರಷ್ಟು ಏರಿಕೆಯಾಗಿದೆ.