ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರಾರಂಭದಲ್ಲಿ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರದ ಆರಂಭದಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿಸುತ್ತಿದೆ.

ಬಿಎಸ್ಇ 30 ಷೇರು ಸೂಚ್ಯಂಕ ವಾರದಲ್ಲಿ 253 ಪಾಯಿಂಟ್ ಏರಿಕೆ ಕಂಡಿದ್ದು, ಇಂದು ದಿನದಾರಂಭದ ವಹಿವಾಟಿನಲ್ಲಿ 63.11 ಪಾಯಿಂಟ್ ಅಂದರೆ ಶೇ.0.34ರಷ್ಟು ಏರಿಕೆ ಕಂಡು 18,194.09ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 17.15 ಪಾಯಿಂಟ್ ಅಂದರೆ ಶೇ.0.31ರಷ್ಟು ಏರಿಕೆ ಕಂಡು 5,466.25ಕ್ಕೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ.0.27ರಷ್ಟು ಏರಿಕೆ ಕಂಡರೆ, ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.62ರಷ್ಟು ಏರಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ಶೇ.0.52, ಐಸಿಐಸಿಐ ಬ್ಯಾಂಕ್ ಶೇ.0.85, ಟಾಟಾ ಪವರ್ ಶೇ.0.14, ಟಿಸಿಎಸ್ ಶೇ.0.68, ವಿಪ್ರೋ ಶೇ.0.68ರಷ್ಟು ಏರಿದೆ.

ಆದರೆ ಮಾರುತಿ ಸುಝುಕಿ ಷೇರು ಶೇ.9.09ರಷ್ಟು ಭಾರೀ ಇಳಿಕೆ ಕಂಡಿದೆ.

ಹಾಂಗ್‌ಕಾಂಗ್‌ ಷೇರು ಶೇ.0.26ರಷ್ಟು ಏರಿಕೆಯಾಗಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.0.90ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.99ರಷ್ಟು ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ