ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಆರ್‌ಬಿಐ ಪರಿಣಾಮ: ಷೇರುಪೇಟೆಯಲ್ಲಿ ಜಿಗಿತ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿಗೆ 57 ಪಾಯಿಂಟ್ ಏರಿಕೆ ಕಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ತ್ರೈಮಾಸಿಕ ಅವಧಿಯ ಅಂಗವಾಗಿ, ಇಂದು ಆರ್ಥಿಕ ಪರಿಷ್ಕರಣ ಸಭೆ ನಡೆಸಲಿದ್ದು, ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿರುವುದರಿಂದ ಈ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಕೊಂಚ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 57.09 ಪಾಯಿಂಟ್ ಅಂದರೆ ಶೇ.0.31ರಷ್ಟು ಏರಿಕೆ ಕಂಡು 18,077.14ಕ್ಕೆ ತಲುಪಿದೆ. ಇದಕ್ಕೂ ಮೊದಲು ಸೂಚ್ಯಂಕ 110.93ರಷ್ಟು ಇಳಿಕೆ ಕಂಡಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 15.15 ಪಾಯಿಂಟ್ ಅಂದರೆ ಶೇ.0.27ರಷ್ಟು ಏರಿಕೆ ಕಂಡು 5,433.75ಕ್ಕೆ ತಲುಪಿದೆ.

ಮಾರುತಿ ಸುಝುಕಿ ಶೇ.0.86ರಷ್ಟು ಏರಿಕೆಯಾದರೆ, ಟಾಟಾ ಮೋಟಾರ್ಸ್ ಶೇ.0.65ರಷ್ಟು ಚೇತರಿಸಿದೆ. ಇನ್ಫೋಸಿಸ್ ಟೆಕ್ನಾಲಜೀಸ್ ಶೇ0.47, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.44, ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.0.57, ಟಾಟಾ ಸ್ಟೀಲ್ ಶೇ.0.29ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ