ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಷೇರುಪೇಟೆಯಲ್ಲಿ ಏರಿಕೆ, ಬ್ಯಾಂಕಿಂಗ್ ಷೇರುಗಳ ಜಿಗಿತ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 57 ಪಾಯಿಂಟ್ ಏರಿಕೆಯಾಗಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯಕ್ಕೆ 57.56 ಪಾಯಿಂಟ್ ಏರಿಕೆಯಾಗಿ 18,077.61ಕ್ಕೆ ತಲುಪಿದೆ. ಬಿಎಸ್ಇ 30 ಷೇರುಗಳ ಪೈಕಿ 20 ಷೇರುಗಳು ಏರಿಕೆಯಾದರೆ ಉಳಿದವು ಇಳಿಕೆಯಾಗಿವೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 12 ಪಾಯಿಂಟ್ ಏರಿಕೆಯಾಗಿ 5,430.60ಕ್ಕೆ ತಲುಪಿದೆ.

ಬ್ಯಾಂಕಿಂಗ್ ಷೇರುಗಳು ಶೇ.8.5ರ ಭಾರೀ ಏರಿಕೆ ಕಂಡಿದ್ದು, ಈ ಪೈಕಿ ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಷೇರುಗಳು ಉತ್ತಮ ಏರಿಕೆ ದಾಖಲಿಸಿವೆ.

ಆಟೋ ಷೇರುಗಳು ಶೇ.2.44ರಷ್ಟು ಏರಿಕೆಯಾಗಿದೆ. ಈ ಪೈಕಿ ಬಜಾಜ್ ಆಟೋ, ಹೀರೋ ಹೊಂಡಾ ಷೇರುಗಳು ಉತ್ತಮ ಏರಿಕೆ ದಾಖಲಿಸಿವೆ. ರಿಯಾಲ್ಟಿ ಷೇರುಗಳು ಶೇ.1.47ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ