ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 79 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 79 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 78.85 ಪಾಯಿಂಟ್ ಅಂದರೆ ಶೇ.0.43ರಷ್ಟು ಇಳಿಕೆ ಕಂಡು 17,913.15ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 25.40 ಪಾಯಿಂಟ್ ಅಂದರೆ ಶೇ.0.46ರಷ್ಟು ಇಳಿಕೆ ಕಂಡು 5,383.50ಕ್ಕೆ ತಲುಪಿದೆ.

ಒಎನ್‌ಜಿಸಿ ಷೇರು ಶೇ.0.99ರಷ್ಟು ಇಳಿಕೆಯಾಗಿದೆ. ಹೀರೋ ಹೊಂಡಾ ಶೇ.2ರಷ್ಟು ಕುಸಿತವಾಗಿದೆ. ಇಳಿಕೆ ಕಂಡ ಇತರ ಷೇರುಗಳ ಪೈಕಿ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.47, ಟಾಟಾ ಮೋಟಾರ್ಸ್ ಶೇ.1.44, ಎಸ್‌ಬಿಐ ಶೇ.0.38, ಐಸಿಐಸಿಐ ಬ್ಯಾಂಕ್ ಶೇ.0.82, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.76, ಡಿಎಲ್ಎಫ್ ಲಿಮಿಟೆಡ್ ಶೇ.0.44, ಟಿಸಿಎಸ್ ಶೇ.0.69ರಷ್ಟು ಇಳಿಕೆಯಾಗಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.0.59ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ ಶೇ.1.50ರಷ್ಟು ಕುಸಿತಗೊಂಡಿದೆ. ಯುಎಸ್ ಡೋ ಜೋನ್ಸ್ ಇಂಡಸ್ಟ್ರಿಯಲ್ ಶೇ.0.29ರಷ್ಟು ಕುಸಿತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ