ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ 263 ಪಾಯಿಂಟ್ ಇಳಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಈ ವಾರದಲ್ಲಿ 263 ಪಾಯಿಂಟ್‌ಗಳಷ್ಟು ಕುಸಿದಿದೆ. ಕ್ಯಾಪಿಟಲ್ ಗೂಡ್ಸ್, ಆಯಿಲ್ ಅಂಡ್ ಗ್ಯಾಸ್, ರಿಯಾಲ್ಟಿ, ಪವರ್ ಷೇರುಗಳು ಪ್ರಮುಖವಾಗಿ ಇಳಿಕೆ ಕಂಡ ಷೇರುಗಳಾಗಿವೆ.

ಬಿಎಸ್ಇ 30 ಷೇರು ಸೂಚ್ಯಂಕ 262.69 ಪಾಯಿಂಟ್ ಅಂದರೆ ಶೇ.1.45ರಷ್ಟು ವಾರದಲ್ಲಿ ಇಳಿಕೆ ಕಂಡಿದೆ. ಕಳೆದ ಮೂರು ವಾರಗಳಲ್ಲಿ 670.03 ಪಾಯಿಂಟ್ ಏರಿಕೆ ಕಂಡು ಶೇ.3.84ರ ಬೆಳವಣಿಗೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 81.50 ಪಾಯಿಂಟ್ ಅಂದರೆ ಶೇ.1.5ರಷ್ಟು ಇಳಿಕೆ ಕಂಡು 5,367.60ಕ್ಕೆ ತಲುಪಿದೆ.

ಮಾರುತಿ ಸುಝುಕಿ ವಾರದಲ್ಲಿ ಶೇ.11.79ರಷ್ಟು ಇಳಿಕೆ ಕಂಡಿದೆ. ಜಯಪ್ರಕಾಶ್ ಅಸೋಸಿಯೇಟ್ಸ್ ಶೇ.8.05ರಷ್ಟು ವಾರದಲ್ಲಿ ಇಳಿದಿದೆ. ಹೀರೋ ಹೊಂಡಾ ಷೇರು ವಾರದಲ್ಲಿ ಶೇ.7.28ರಷ್ಟು ಕುಸಿದಿದೆ.

ಎಲ್ಎಂಡ್‌ಟಿ ಶೇ.7.24, ಡಿಎಲ್ಎಫ್ ಶೇ.6.53, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.5.33, ರಿಲಯನ್ಸ್ ಇಂಡಸ್ಟ್ರೀಸ್ ಶೇ.4.77, ಜಿಂದಾಲ್ ಸ್ಟೀಲ್ ಶೇ.2.48, ರಿಲಯನ್ಸ್ ಇನ್‌ಫ್ರಾ ಶೇ.2.47, ಭಾರ್ತಿ ಏರ್‌ಟೆಲ್ ಶೇ.2.17ರಷ್ಟು ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ