ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಪುಟಿದೆದ್ದ ಷೇರು ಮಾರುಕಟ್ಟೆ: 171 ಪಾಯಿಂಟ್ ಏರಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರದ ಆರಂಭದ ವಹಿವಾಟಿನಲ್ಲಿ 171 ಪಾಯಿಂಟ್ ಪುಟಿದೆದ್ದಿದೆ. ಬ್ಯಾಂಕಿಂಗ್, ಆಟೋ, ಮೆಟಲ್ ಷೇರುಗಳು ಉತ್ತಮ ಏರಿಕೆ ಕಂಡಿದ್ದು ಇದು ಷೇರುಪೇಟೆಯ ಏರಿಕೆಗೆ ಪುಷ್ಟಿ ನೀಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 171.69 ಪಾಯಿಂಟ್ ಅಂದರೆ ಶೇ.0.83ರಷ್ಟು ಏರಿಕೆ ಕಂಡು 18,039.98ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 123.71 ಪಾಯಿಂಟ್ ಕುಸಿತ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 51.90 ಪಾಯಿಂಟ್ ಅಂದರೆ ಶೇ.0.96ರಷ್ಟು ಏರಿಕೆ ದಾಖಲಿಸಿ 5,419.50ಕ್ಕೆ ತಲುಪಿದೆ.

ಆಟೋ ಷೇರುಗಳು ತಮ್ಮ ವಹಿವಾಟು ಹೆಚ್ಚಿಸಿಕೊಂಡಿದೆ. ಬಜಾಜ್ ಆಟೋ ಷೇರು ಶೇ.1.82ರಷ್ಟು ಏರಿಕೆ ಕಂಡರೆ, ಹೀರೋ ಹೊಂಡಾ ಶೇ.1.02, ಮಾರುತಿ ಸುಝುಕಿ ಶೇ.1.02, ಟಾಟಾ ಮೋಟಾರ್ಸ್ ಶೇ.1.46, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.1.21ರಷ್ಟು ಏರಿಕೆ ಕಂಡಿವೆ. ಐಸಿಐಸಿಐ ಬ್ಯಾಂಕ್ ಶೇ.2.44ರಷ್ಟು ಚೇತರಿಸಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಶೇ.0.79, ರಿಲಯನ್ಸ್ ಇನ್‌ಫ್ರಾ ಶೇ.0.65, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.1.05, ಡಿಎಲ್ಎಫ್ ಶೇ.1, ಹಿಂಡಲ್ಕೋ ಶೇ.1.50, ಟಾಟಾ ಸ್ಟೀಲ್ ಶೇ.0.87, ಸ್ಟೆರ್‌ಲೈಟ್ ಶೇ.1.69ರಷ್ಟು ಏರಿಕೆ ಕಂಡಿವೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.1.37ರಷ್ಟು ಚೇತರಿಕೆ ಕಂಡಿದೆ. ಇದೇ ವೇಳೆ ಜಪಾನಿನ ನಿಕ್ಕಿ ಷೇರು ಶೇ.0.47ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ