ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಿದೇಶೀ ಬಂಡವಾಳ ಖರೀದಿ; ಷೇರುಪೇಟೆಗೆ ಚುರುಕು (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 86 ಪಾಯಿಂಟ್ ಏರಿಕೆ ಕಂಡಿದೆ. ವಿದೇಶೀ ಬಂಡವಾಳಗಳ ಖರೀದಿ ಗರಿಗೆದರಿದ್ದು, ಷೇರುಪೇಟೆಗೆ ಚುರುಕು ನೀಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 86.24 ಪಾಯಿಂಟ್ ಅಂದರೆ ಶೇ.0.47ರಷ್ಟು ಏರಿಕೆ ಕಂಡು 18,167.45ಕ್ಕೆ ತಲುಪಿದೆ. ಇದಕ್ಕೂ ಮೊದಲ ನಿನ್ನೆಯ ವಹಿವಾಟಿನಲ್ಲಿ 212.92 ಪಾಯಿಂಟ್ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 27.55 ಪಾಯಿಂಟ್ ಅಂದರೆ ಶೇ.0.50ರಷ್ಟು ಏರಿಕೆ ಕಂಡು 5,459.20ಕ್ಕೆ ತಲುಪಿದೆ.

ಆಟೋ ಷೇರುಗಳು ಉತ್ತಮ ಏರಿಕೆ ಕಂಡಿದ್ದು, ಹೀರೋ ಹೊಂಡಾ ಶೇ.0.25, ಮಾರುತಿ ಸುಝುಕಿ ಶೇ.0.60, ಟಾಟಾ ಮೋಟಾರ್ಸ್ ಶೇ.0.14, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.09ರಷ್ಟು ಏರಿಕೆಯಾಗಿದೆ. ಇನ್ನುಳಿದಂತೆ, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.19, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.07, ಐಸಿಐಸಿಐ ಬ್ಯಾಂಕ್ ಶೇ.1.44, ಬಿಎಚ್‌ಇಎಲ್ ಶೇ.0.21, ಹಿಂಡಲ್ಕೋ ಶೇ.0.18, ಟಾಟಾ ಸ್ಟೀಲ್ ಶೇ.0.17ರಷ್ಟು ಏರಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಗ ಶೇ.0.73ರಷ್ಟು ಏರಿಕೆಯಾಗಿದೆ. ಜಪಾನಿ ಷೇರು ನಿಕ್ಕಿ ಮಾರುಕಟ್ಟೆ ಶೇ.1.53ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.99ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ