ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭರ್ಜರಿ ಏರಿಕೆಯತ್ತ ಮುನ್ನುಗ್ಗಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 103 ಪಾಯಿಂಟ್ ಪುಟಿದೆದ್ದಿದ್ದು, ಇದು ಫೆಬ್ರವರಿ 5ರ ನಂತರ ಅತೀ ಹೆಚ್ಚಿನ ಏರಿಕೆಯಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ ಕಳೆದೆರಡು ವಹಿವಾಟಿನಲ್ಲಿ 247 ಪಾಯಿಂಟ್ ಏರಿಕೆ ಕಂಡಿದ್ದು, ಇಂದಿನ ದಿನದಂತ್ಯದ ವಹಿವಾಟಿನಲ್ಲಿ 102.61 ಪಾಯಿಂಟ್ ಅಂದರೆ ಶೇ.0.57ರಷ್ಟು ಏರಿಕೆ ಕಂಡು 18,217.44ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 28.30 ಪಾಯಿಂಟ್ ಅಂದರೆ ಶೇ.0.52ರಷ್ಟು ಚೇತರಿಸಿ 5,467.85ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 20 ಷೇರುಗಳು ಏರಿಕೆಯಾದರೆ 10 ಷೇರುಗಳು ಇಳಿಕೆಯಾಗಿವೆ.

ಐಟಿ ಷೇರು ಸೂಚ್ಯಂಕ ಶೇ.3.26ರಷ್ಟು ಏರಿಕೆಯಾಗಿವೆ. ಇನ್ಫೋಸಿಸ್ ಟೆಕ್ನಾಲಜೀಸ್ 83.25 ರೂಪಾಯಿ ಏಱಿದೆ. ಟಾಟಾ ಕನ್ಸಲ್ಟೆನ್ಸಿ 36.90 ರೂಪಾಯಿ ಏರಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ 10.20 ರೂಪಾಯಿ ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ