ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 44 ಪಾಯಿಂಟ್ ಇಳಿಕೆಯಾಗಿದೆ.
ಬಿಎಸ್ಇ 30 ಷೇರು ಸೂಚ್ಯಂಕ 44.61 ಪಾಯಿಂಟ್ ಇಳಿಕೆ ಕಂಡು 18,172.83ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 20.75ರಷ್ಟು ಇಳಿಕೆಯಾಗಿ 5,447.10ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 11 ಷೇರುಗಳು ಏರಿಕೆ ಕಂಡು 19 ಷೇರುಗಳು ಇಳಿಕೆಯ ಹಾದಿ ಕಂಡಿವೆ. ಹೆಲ್ತ್ ಕೇರ್, ಪವರ್, ಮೆಟಲ್, ಬ್ಯಾಂಕಿಂಗ್ ಷೇರುಗಳು ಇಳಿಕೆಯ ಹಾದಿ ಕಂಡರೆ, ಐಟಿ, ರಿಯಾಲ್ಟಿ, ಆಟೋ ಷೇರುಗಳು ಏರಿಕೆ ಕಂಡಿವೆ.