ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಚೇತರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 33 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 33.49 ಪಾಯಿಂಟ್ ಅಂದರೆ ಶೇ.0.18ರಷ್ಟು ಏರಿಕೆಯಾಗಿ 18,206.32ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 9.55 ಪಾಯಿಂಟ್ ಅಂದರೆ ಶೇ.0.18ರಷ್ಟು ಏರಿಕೆ ಕಂಡು 5,456.05ಕ್ಕೆ ತಲುಪಿದೆ.

ಆಟೋ ಷೇರುಗಳ ಪೈಕಿ ಮಾರುತಿ ಸುಝುಕಿ ಶೇ.0.54, ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.65, ಟಾಟಾ ಮೋಟಾರ್ಸ್ ಶೇ.0.41ರಷ್ಟು ಏರಿಕೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.21ರಷ್ಟು ಏರಿದರೆ, ಟಾಟಾ ಸ್ಟೀಲ್ ಶೇ.0.68, ಸ್ಟೆರ್‌ಲೈಟ್ ಶೇ.0.23, ಹಿಂಡಲ್ಕೋ ಶೇ.0.39, ಲಾರ್ಸೆನ್ ಅಂಡ್ ಟರ್ಬೋ ಶೇ.0.37ರಷ್ಟು ಏರಿಕೆಯಾಗಿದೆ.

ಆದರೂ, ಮಾರುಕಟ್ಟೆ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಒತ್ತಡದಲ್ಲಿದ್ದು, ಶೇ.0.50ಯಷ್ಟು ಇಳಿಕೆ ಕಂಡಿದೆ. ಇನ್ಫೋಸಿಸ್ ಶೇ.0.42ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ