ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ಕುಸಿತ (Sensex)
Bookmark and Share Feedback Print
 
ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ಇಳಿಕೆಯತ್ತ ಸಾಗಿದೆ. ಅಮೆರಿಕ ಷೇರುಪೇಟೆ, ಯುರೋಪ್ ಹಾಗೂ ಏಷ್ಯನ್ ಸೂಚ್ಯಂಕಗಳೂ ಇಳಿಕೆಯನ್ನೇ ಕಂಡಿವೆ.

ಅಮೆರಿಕಾದ ನಾಸ್ಡಾಕ್ ಕಾಂಪೋಸಿಟ್ ಶೇ.0.2ರಷ್ಟು ಕುಸಿದರೆ, ಎಸ್ಅಂಡ್‌ಪಿ 500 ಸೂಚ್ಯಂಕ ಶೇ.0.37ರಷ್ಟು ಕುಸಿದಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.2ರಷ್ಟು ಇಳಿಕೆ ಕಂಡಿದೆ.

ಯುರೋಪಿನ ಷೇರುಗಳೂ ಕುಸಿತದತ್ತ ಸಾಗಿವೆ. ಸಿಎಸಿ 40 ಷೇರು ಶೇ.1.28ರಷ್ಟು ಕುಸಿದರೆ, ಎಫ್‌ಟಿಎಸ್‌ಇ ಶೇ.0.75ರಷ್ಟು ಇಳಿಕೆ ಕಂಡಿದೆ.

ಎಂಎಸ್‌ಸಿಐ ಏಷ್ಯಾ ಪೆಸಿಫಿಕ್ ಸೂಚ್ಯಂಕ ಶೇ.0.1ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ 225 ಷೇರು ಸೂಚ್ಯಂಕ ಶೇ.0.12ರಷ್ಟು ಕುಸಿತ ಕಂಡಿದೆ. ಕೊರಿಯಾದ ಕೊಸ್ಪಿ ಸೂಚ್ಯಂಕ ಶೇ.0.5ರಷ್ಟು ಇಳಿದಿದೆ. ಆದರೆ ಹ್ಯಾಂಗ್‌ಸೆಂಗ್ ಸೂಚ್ಯಂಕ ಮಾತ್ರ ಶೇ.0.59ರಷ್ಟು ಏರಿಕೆ ಕಂಡಿದೆ.

ಆಸ್ಟ್ರೇಲಿಯಾದ ಎಸ್ಅಂಡ್‌ಪಿ/ ಎಎಸ್‌ಎಕ್ಸ್ 200 ಸೂಚ್ಯಂಕ ಶೇ.0.3ರಷ್ಟು ಇಳಿದರೆ, ನ್ಯೂಜಿಲ್ಯಾಂಡಿನಲ್ಲೂ ಷೇರು ಸೂಚ್ಯಂಕ ಶೇ.0.1ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಸೆನ್ಸೆಕ್ಸ್