ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 56 ಪಾಯಿಂಟ್ ಕುಸಿತ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 56.60 ಪಾಯಿಂಟ್ ಅಂದರೆ ಶೇ.0.31ರಷ್ಟು ಇಳಿಕೆ ಕಂಡು 18,230.90ಕ್ಕೆ ತಲುಪಿದೆ. ಐಟಿ, ಆಟೋ, ಮೆಟಲ್ ಹಾಗೂ ಬ್ಯಾಂಕಿಂಗ್ ಷೇರುಗಳು ಇಳಿಕೆ ಕಂಡ ಷೇರು ವಲಯಗಳಾಗಿವೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 19.85 ಪಾಯಿಂಟ್ ಅಂದರೆ ಶೇ.0.36ರಷ್ಟು ಇಳಿಕೆಯಾಗಿದೆ.

ಇನ್ಫೋಸಿಸ್ ಟೆಕ್ನಾಲಜಿ ಶೇ.0.60, ಟಿಸಿಎಸ್ ಶೇ.0.14, ವಿಪ್ರೋ ಶೇ.0.67, ಐಸಿಐಸಿಐ ಬ್ಯಾಂಕ್ ಶೇ.0.79, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.28, ಟಾಟಾ ಮೋಟಾರ್ಸ್ ಶೇ.0.51, ಲಾರ್ಸೆನ್ ಅಂಡ್ ಟರ್ಬೋ ಶೇ.0.23ರಷ್ಟು ಇಳಿಕೆ ಕಂಡಿವೆ.

ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾತ್ರ ಶೇ.0.32ರಷ್ಟು ಏರಿಕೆಯಾಗಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.87ರಷ್ಟು ಇಳಿಕೆ ಕಂಡಿದೆ. ಜಪಾನ್‌ನ ನಿಕ್ಕಿ ಷೇರು ಮಾರುಕಟ್ಟೆ ಶೇ.0.53ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ