ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 44 ಪಾಯಿಂಟ್ ಚಿಗುರಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 44 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದಲ್ಲಿ 43.89 ಪಾಯಿಂಟ್ ಅಂದರೆ ಶೇ.0.24ರಷ್ಟು ಏರಿಕೆ ಕಂಡು 18,263.88ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 12.55 ಪಾಯಿಂಟ್ ಅಂದರೆ ಶೇ.0.20ರಷ್ಟು ಏರಿದೆ.

ಟಾಟಾ ಮೋಟಾರ್ಸ್ ಷೇರು ಸೂಚ್ಯಂಕ ಎರಡನೇ ದಿನವೂ ಭರ್ಜರಿಯಾಗಿ ಶೇ.5.64ರಷ್ಟು ಏರಿದೆ. ಇನ್ನುಳಿದ ಆಟೋ ವಲಯದ ಷೇರುಗಳ ಪೈಕಿ ಹೀರೋ ಹೊಂಡಾ, ಮಹೀಂದ್ರಾ ಅಂಡ್ ಮಹೀಂದ್ರಾ, ಮಾರುತಿ ಸುಝುಕಿ ಷೇರುಗಳು ಶೇ.0.17ರಷ್ಟು ಏರಿದೆ.

ಟೆಲಿಕಾಂ ದೈತ್ಯ ಭಾರ್ತಿ ಏರ್ಟೆಲ್ ಶೇ.0.19ರಷ್ಟು ಇಳಿಕೆ ಕಂಡಿದೆ.

ಇನ್ನುಳಿದಂತೆ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.15ರಷ್ಟು ಏರಿಕೆಯಾದರೆ, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.35, ಎಸ್‌ಬಿಐ ಶೇ.0.23, ಡಿಎಲ್ಎಫ್ ಲಿಮಿಟೆಡ್ ಶೇ.0.42, ಟಾಟಾ ಸ್ಟೀಲ್ ಶೇ.1.44ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ