ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 150 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 150 ಪಾಯಿಂಟ್ ಕೆಳಗಿಳಿದಿದೆ. ಐಟಿ ಷೇರುಗಳ ಇಳಿಕೆ ಷೇರು ಮಾರುಕಟ್ಟೆಯನ್ನು ಇಳಿಕೆಯತ್ತ ತಳ್ಳಿದೆ.

ಬಿಎಸ್ಇ 30 ಷೇರು ಸೂಚ್ಯಂಕ 149.80 ಪಾಯಿಂಟ್ ಇಳಿಕೆ ಕಂಡು 18,070.19ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 40.10 ಪಾಯಿಂಚ್ ಇಳಿಕೆ ಕಂಡಿದೆ.

ಸಾಫ್ಟ್‌ವೇರ್ ದೈತ್ಯ ಸಂಸ್ಥೆಗಳ ಷೇರು ಇಳಿಕೆಯತ್ತ ಸಾಗಿದೆ. ಇನ್ಫೋಸಿಸ್ ಷೇರು 21.85 ರೂಪಾ ಕೆಳಗಿಳಿದರೆ, ವಿಪ್ರೋ 9.75 ರೂಪಾಯಿ ಕುಸಿದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಷೇರು 5.70 ರೂಪಾಯಿ ಇಳಿದಿದೆ.

ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಸೂಚ್ಯಂಕ ಶೇ.2.70ಯಷ್ಟು ಇಳಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.83ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ