ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 18,000ಕ್ಕಿಂತಲೂ ಕೆಳಗಿಳಿದ ಷೇರು ಮಾರುಕಟ್ಟೆ ಸೂಚ್ಯಂಕ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 155 ಪಾಯಿಂಟ್ ಇಳಿಕೆ ಕಾಣುವ ಮೂಲಕ 18,000ಕ್ಕಿಂತಲೂ ಕೆಳಗಿಳಿದಿದೆ.

ಬಿಎಸ್ಇ 30 ಷೇರು ಸೂಚ್ಯಂಕ 155.41 ಪಾಯಿಂಟ್ ಅಂದರೆ ಶೇ.0.86ರಷ್ಟು ಕೆಳಗಿಳಿದು 17,914.78ಕ್ಕೆ ತಲುಪಿದೆ. ಮೆಟಲ್, ಐಟಿ, ರಿಯಾಲ್ಟಿ ಷೇರುಗಳು ಇಳಿಕೆಯ ಹಾದಿಯಲ್ಲಿದ್ದು ಶೇ.1.36ರಷ್ಟು ಕುಸಿದಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 48.15 ಪಾಯಿಂಟ್ ಕುಸಿತ ಕಂಡು 5,372.45ಕ್ಕೆ ತಲುಪಿದೆ.

ಏಷ್ಯನ್ ಮಾರುಕಟ್ಟೆಯಲ್ಲಿ ಷೇರು ವಹಿವಾಟು ಒತ್ತಡ ಅನುಭವಿಸುತ್ತಿದ್ದು, ಶೇ.2.02ರಷ್ಟು ಇಳಿಕೆಯಾಗಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.2.49ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ