ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ತಟಸ್ಥವಾಗಿ ಉಳಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಬೆಳಗ್ಗಿನ ವಹಿವಾಟಿನಲ್ಲಿ ಇಳಿಕೆ ಕಾಣುವ ಮೂಲಕ 18 ಸಾವಿರಕ್ಕೂ ಕೆಳಗಿಳಿದ ಸೂಚ್ಯಂಕ ಇದೀಗ ದಿನದಂತ್ಯದ ವಹಿವಾಟಿನಲ್ಲಿ ಅಂತಹ ಏರಿಳಿತ ಕಾಣದೆ ತಟಸ್ಥವಾಗಿತ್ತು.

ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯಕ್ಕೆ 3.71 ಪಾಯಿಂಟ್‌ಗಳ ಕೊಂಚ ಏರಿಕೆ ದಾಖಲಿಸಿ 18,073.90ಕ್ಕೆ ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 4.15 ಪಾಯಿಂಟ್ ಇಳಿಕೆ ಕಂಡು 5,416.45ಕ್ಕೆ ತಲುಪಿದೆ.

ಇನ್ಫೋಸಿಸ್ 32.20 ರೂಪಾಯಿ ಇಳಿಕೆ ಕಂಡರೆ, ವಿಪ್ರೋ 5 ರೂಪಾಯಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ 3.75 ರೂಪಾಯಿ, ರಿಲಯನ್ಸ್ ಇಂಡಸ್ಟ್ರೀಸ್ 10.30 ರೂಪಾಯಿ ಇಳಿಕೆ ಕಂಡಿದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರು 180.40 ರೂಪಾಯಿಗಳಷ್ಟು ಏರಿಕೆ ಕಂಡಿದೆ.

ಬಿಎಸ್ಇ 30 ಷೇರುಗಳ ಪೈಕಿ 18 ಷೇರುಗಳು ಇಳಿಕೆಯಾದರೆ, 12 ಷೇರುಗಳು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ