ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರಾಂತ್ಯದಲ್ಲಿ ಕೇವಲ 23 ಪಾಯಿಂಟ್ ಏರಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರಾಂತ್ಯದಲ್ಲಿ 23 ಪಾಯಿಂಟ್‌ಗಳ ಕೊಂಚ ಪ್ರಗತಿ ದಾಖಲಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ ವಾರದಲ್ಲಿ 23 ಪಾಯಿಂಟ್ ಏರಿಕೆ ಕಂಡು 18,167.03ಕ್ಕೆ ಅಂತ್ಯಗೊಂಡಿದೆ.

ರಿಯಾಲ್ಟಿ, ಬ್ಯಾಂಕಿಂಗ್, ಗ್ರಾಹಕ ಬಳಕೆಯ ವಸ್ತುಗಳು ಹಾಗೂ ಆಟೋ ವಲಯದ ಷೇರುಗಳು ಏರಿಕೆ ಕಂಡಿವೆ.

ಬ್ಯಾಂಕಿಂಗ್ ಷೇರುಗಳು ಉತ್ತಮ ಏರಿಕೆ ಕಂಡಿದೆ. ಎಸ್‌ಬಿಐ ತನ್ನ ತ್ರೈಮಾಸಿಕ ಆರ್ಥಿಕ ವರದಿ ಪ್ರಕಟಿಸಿದ್ದು ಉತ್ತಮ ಲಾಭ ಗಳಿಸಿದೆ. ಆದರೆ ಐಟಿ ವಲಯ ಮಾತ್ರ ಇಳಿಕೆ ದಾಖಲಿಸಿದ್ದು, ಐಟಿ ಸಂಸ್ಥೆಗಳ ಷೇರುಗಳು ಭಾರೀ ಕುಸಿತ ಕಂಡಿವೆ.

ಆಟೋ ವಲಯದಲ್ಲಿ ಉತ್ತಮ ಏರಿಕೆ ದಾಖಲಾಗಿದೆ. ಟಾಟಾ ಮೋಟಾರ್ಸ್ ತನ್ನ ತ್ರೈಮಾಸಿಕ ವರದಿಯಲ್ಲಿ ಉತ್ತಮ ಆರ್ಥಿಕ ಅಭಿವೃದ್ಧಿ ದಾಖಲಿಸಿದ ಪರಿಣಾಮ ಇದರ ಷೇರುಗಳು ಶೇ.13.71ರಷ್ಟು ಏರಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ