ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 73 ಪಾಯಿಂಟ್ ಇಳಿಕೆ ಕಂಡಿದೆ. ಲಾಭದ ಮುಂಗಡ ಬುಕ್ಕಿಂಗ್ ಕಾರಣದಿಂದ ಜಾಗತಿಕವಾಗಿ ದುರ್ಬಲ ವಹಿವಾಟು ನಡೆದಿದೆ.
ಬಿಎಸ್ಇ 30 ಷೇರು ಸೂಚ್ಯಂಕ 73.32 ಪಾಯಿಂಟ್ ಇಳಿಕೆ ದಾಖಲಿಸಿ 18,093.71ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 5.80 ಪಾಯಿಂಟ್ ಇಳಿಕೆ ದಾಖಲಿಸಿ 5,446.30ಕ್ಕೆ ತಲುಪಿದೆ.
ಏಷ್ಯನ್ ಮಾರುಕಟ್ಟೆಯೂ ಇಳಿಕೆಯನ್ನೇ ಕಾಣುತ್ತಿದೆ. ಹಾಂಗ್ಕಾಂಗ್ನ ಹ್ಯಾಂಗ್ಸೆಂಗ್ ಸೂಚ್ಯಂಕ ಶೇ.0.26ರಷ್ಟು ಇಳಿಕೆ ಕಂಡಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1.18ರಷ್ಟು ಕುಸಿತ ದಾಖಲಿಸಿದೆ.