ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 116 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 116 ಪಾಯಿಂಟ್ ಕುಸಿತ ಕಂಡಿದೆ. ಬಿಎಸ್ಇ 30 ಷೇರು ಸೂಚ್ಯಂಕ 116.25 ಪಾಯಿಂಟ್ ಇಳಿಕೆ ಕಂಡು 18,050.78ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 33.80 ಪಾಯಿಂಟ್ ಇಳಿಕೆ ದಾಖಲಿಸಿ 5,418.30ಕ್ಕೆ ತಲುಪಿದೆ. ಬಿಎಸ್ಇ 30 ಷೇರುಗಳ ಪೈಕಿ 23 ಷೇರುಗಳು ಕುಸಿತ ಕಂಡರೆ, ಕೇವಲ ಏಳು ಷೇರುಗಳು ಏರಿಕೆ ದಾಖಲಿಸಿವೆ.

ಐಸಿಐಸಿಐ ಬ್ಯಾಂಕ್ ಶೇ.1.89ರಷ್ಟು ಕುಸಿತ ಕಂಡರೆ, ಎಸ್‌ಬಿಐ ಶೇ.1ರಷ್ಟು ಇಳಿಕೆ ಕಂಡಿದೆ. ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.2.74ರಷ್ಟು ಕುಸಿದಿದೆ. ಮೆಟಲ್ ವಲಯದ ಷೇರು ಸೇ.1.50ರಷ್ಟು ಇಳಿಕೆ ಕಂಡಿದೆ. ರಿಯಾಲ್ಟಿ ವಲಯ ಕೂಡಾ ಶೇ.1.09ರಷ್ಟು ಗಣನೀಯ ಇಳಿಕೆ ದಾಖಲಿಸಿದೆ.

ಯುರೋಪಿಯನ್ ಷೇರು ಮಾರುಕಟ್ಟೆ ಎಫ್‌ಟಿಎಸ್‌ಇ 100 ಸೂಚ್ಯಂಕ ಶೇ.0.25ರಷ್ಟು ಇಳಿಕೆ ದಾಖಲಿಸಿದೆ. ಏಷ್ಯನ್ ಮಾರುಕಟ್ಟೆಯ ಪೈಕಿ ಟೋಕಿಯೋ ಮಾರುಕಟ್ಟೆ ಶೇ.0.61ರಷ್ಟು ಕುಸಿದರೆ, ಸಿಂಗಾಪುರದ ಷೇರುಪೇಟೆ ಶೇ.0.22, ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಷೇರುಪೇಟೆ ಶೇ.0.19ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ