ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಳ್ಳುವಿಕೆಗೆ ಚುರುಕು; ಕೊಂಚ ಚೇತರಿಸಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 81 ಪಾಯಿಂಟ್ ಏರಿಕೆ ದಾಖಲಿಸಿದೆ. ಆಟೋ, ಬ್ಯಾಂಕಿಂಗ್ ಹಾಗೂ ಆಯಿಲ್ ಷೇರುಗಳು ಉತ್ತಮ ಕೊಳ್ಳುವಿಕೆಯನ್ನು ಕಾಣುತ್ತಿದ್ದು, ಇದು ಷೇರುಪೇಟೆಯ ಜಿಗಿತಕ್ಕೆ ಕಾರಣವಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 81.44 ಪಾಯಿಂಟ್ ಏರಿಕೆ ಕಂಡು 18,132.22ಕ್ಕೆ ತಲುಪಿದ್ದು, ಇದಕ್ಕೂ ಮೊದಲ ವಹಿವಾಟಿನಲ್ಲಿ 116.25 ಪಾಯಿಂಟ್ ಕುಸಿತ ಕಂಡಿತ್ತು.

ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 20.15 ಪಾಯಿಂಟ್ ಚೇತರಿಕೆ ಕಂಡು 5,438.45ಕ್ಕೆ ತಲುಪಿದೆ.

ಏಷ್ಯನ್ ಮಾರುಕಟ್ಟೆಯಲ್ಲಿ ಮಿಶ್ರಫಲ ಕಂಡು ಬಂದಿದೆ. ಚೀನಾದ ಷೇರು ಶೇ.0.28ರಷ್ಟು ಏರಿಕೆ ಕಂಡಿದ್ದು, ಇನ್ನೂ ಹೆಚ್ಚಿನ ಏರಿಕೆ ಕಾಣುವ ನಿರೀಕ್ಷೆಯಿದೆ. ಜಪಾನಿ ಷೇರು ನಿಕ್ಕಿ ಸೂಚ್ಯಂಕ ಶೇ.1.16ರಷ್ಟು ಇಳಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.10ಯಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ