ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಳ್ಳುವಿಕೆಗೆ ಚುರುಕು; ಕೊಂಚ ಏರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ 80 ಪಾಯಿಂಟ್ ಏರಿಕೆ ಕಂಡಿದೆ. ರಿಯಾಲ್ಟಿ, ಮೆಟಲ್ ಷೇರುಗಳು ಉತ್ತಮ ಕೊಳ್ಳುವಿಕೆ ಕಾಣುತ್ತಿದ್ದು ಷೇರುಪೇಟೆಯ ಜಿಗಿತಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 79.89 ಪಾಯಿಂಟ್ ಅಂದರೆ ಶೇ.0.44ರಷ್ಟು ಏರಿಕೆ ಕಂಡು 18,128.74ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 40.75 ಪಾಯಿಂಟ್ ಅಂದರೆ ಶೇ.0.75ರಷ್ಟು ಏರಿಕೆಯಾಗಿ 5,454.90ಕ್ಕೆ ತಲುಪಿದೆ.

ಏಷ್ಯನ್ ಮಾರುಕಟ್ಟೆಯಲ್ಲಿ ಷೇರುಪೇಟೆಗೆ ಚುರುಕು ಮೂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.43ರಷ್ಟು ಏರಿಕೆಯಾಗಿದೆ. ಜಪಾನಿನ ನಿಕ್ಕಿ ಶೇ.1.07ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.01ರಷ್ಟು ಚೇತರಿಕೆ ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ