ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭರ್ಜರಿ ಜಿಗಿತ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 208 ಪಾಯಿಂಟ್ ಏರಿಕೆ ದಾಖಲಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ 208.27 ಪಾಯಿಂಟ್ ಅಂದರೆ ಶೇ.1.15ರಷ್ಟು ಏರಿಕೆ ಕಂಡು 18,257.12ಕ್ಕೆ ತಲುಪಿದೆ. ಕಳೆದೆರವು ವಹಿವಾಟುಗಳಲ್ಲಿ ಸೂಚ್ಯಂಕ 118 ಪಾಯಿಂಟ್ ಇಳಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.1.2ರಷ್ಟು ಏರಿಕೆ ಕಂಡು 5,479.15ಕ್ಕೆ ತಲುಪಿದೆ.

ಇನ್ಫೋಸಿಸ್ ಸೇ.2ರಷ್ಟು ಏರಿಕೆ ಕಂಡಿದೆ. ಟಿಸಿಎಸ್ ಶೇ.2.13, ವಿಪ್ರೋ ಶೇ.1.83ರಷ್ಟು ಏರಿಕೆ ಕಂಡಿದೆ. ಆದರೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ.0.65ರಷ್ಟು ಇಳಿಕೆ ಕಂಡಿದೆ.

ಬ್ಯಾಂಕಿಂಗ್ ವಲಯದಲ್ಲಿ ಉತ್ತಮ ಕೊಳ್ಳುವಿಕೆ ವ್ಯಕ್ತವಾಗಿದ್ದು, ಇದು ಷೇರುಪೇಟೆಯ ಏರಿಕೆ ಸಾಕಷ್ಟು ಪುಷ್ಟಿ ನೀಡಿದೆ. ಎಚ್‌ಡಿಎಫ್‌ಸಿ ಶೇ.3.14, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.3, ಐಸಿಐಸಿಐ ಬ್ಯಾಂಕ್ ಶೇ.1ರಷ್ಟು ಏರಿದೆಯಾದರೂ, ಎಸ್‌ಬಿಐ ಶೇ.0.1ರಷ್ಟು ಇಳಿಕೆ ಕಂಡಿದೆ.

ಬಿಎಸ್ಇ 30 ಷೇರುಗಳ ಪೈಕಿ 22 ಷೇರುಗಳು ಏರಿಕೆಯಾದರೆ 8 ಷೇರುಗಳು ಇಳಿಕೆಯಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ