ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ದಾಖಲೆಯ ಏರಿಕೆ: 5,500 ದಾಟಿದ ನಿಫ್ಟಿ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 88 ಪಾಯಿಂಟ್ ಏರಿಕೆ ಕಂಡು 2008ರ ಫೆಬ್ರವರಿ ನಂತರ ಅತ್ಯುಚ್ಛ ಮಟ್ಟವನ್ನು ತಲುಪಿದೆ.

ಬಿಎಸ್ಇ 30 ಷೇರು ಸೂಚ್ಯಂಕ 88.04 ಪಾಯಿಂಟ್ ಅಂದರೆ ಶೇ.0.48ರಷ್ಟು ಏರಿಕೆ ಕಂಡು 18,345.16ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 26.70 ಪಾಯಿಂಟ್ ಏರಿಕೆ ಕಂಡು 5,505.85ಕ್ಕೆ ತಲುಪಿದೆ. 5,500ಕ್ಕೂ ಹೆಚ್ಚಿನ ಮಟ್ಟಕ್ಕೆ ತಲುಪಿರುವ ನಿಫ್ಟಿ 2008ರ ಫೆಬ್ರವರಿ ನಂತರ ಈ ಮಟ್ಟ ತಲುಪಿದ್ದು ಇದೇ ಮೊದಲು.

ಹೆಲ್ತ್ ಕೇರ್, ಕ್ಯಾಪಿಟಲ್ ಗೂಡ್ಸ್, ಮೆಟಲ್, ಆಯಿಲ್ ಅಂಡ್ ಗ್ಯಾಸ್ ಷೇರುಗಳು ಉತ್ತಮ ಏರಿಕೆಯತ್ತ ಮುನ್ನುಗ್ಗುತ್ತಿವೆ.

ಏಷ್ಯನ್ ಮಾರುಕಟ್ಟೆ ಹಾಗೂ ಯುಎಸ್ ಮಾರುಕಟ್ಟೆ ಸೂಚ್ಯಂಕ ಏರಿಕೆಯತ್ತ ಸಾಗಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.49ರಷ್ಟು ಏರಿಕೆಯಾಗಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ