ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ ಭರ್ಜರಿ ಏರಿಕೆ ದಾಖಲಿಸಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಈ ವಾರ ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಈ ವಾರ ಹೆಚ್ಚು ಏರಿಳಿತಗಳನ್ನು ಕಂಡ ಬಿಎಸ್ಇ, ನಿಫ್ಟಿ ವಾರಾಂತ್ಯದ ವಹಿವಾಟಿನಲ್ಲಿ ಉತ್ತಮ ಏರಿಕೆಯನ್ನೇ ದಾಖಲಿಸಿವೆ.

ವಾರದಲ್ಲಿ ಬಿಎಸ್ಇ 30 ಸೂಚ್ಯಂಕ 234.79 ಪಾಯಿಂಟ್ ಅಂದರೆ ಶೇ.1.29ರಷ್ಟು ಏರಿಕೆ ಕಂಡು 18,401.82ಕ್ಕೆ ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 78.55 ಪಾಯಿಂಟ್ ಅಂದರೆ ಶೇ.1.44ರಷ್ಟು ಏರಿಕೆ ದಾಖಲಿಸಿ ವಾರದಲ್ಲಿ 5,530.65ಕ್ಕೆ ಅಂತ್ಯಗೊಂಡಿದೆ. ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಈ ವಾರದ ವಹಿವಾಟಿನಲ್ಲಿ ನಿಫ್ಟಿ 5,500ಕ್ಕೂ ಮೇಲೇರಿದ್ದು ವಿಶೇಷ.

ವಾರದಲ್ಲಿ ಎಫ್ಎಂಸಿಜಿ ಶೇ.2.92ರಷ್ಟು ಏರಿಕೆ ಕಂಡರೆ, ಕ್ಯಾಪಿಟಲ್ ಗೂಡ್ಸ್ ಶೇ.1.35ರಷ್ಟು, ಆಯಿಲ್ ಅಂಡ್ ಗ್ಯಾಸ್ ಶೇ.0.70, ಆಟೋ ಶೇ.1.12ರಷ್ಟು ಏರಿಕೆ ದಾಖಲಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ