ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಖರೀದಿಗೆ ಚುರುಕು; ಷೇರುಪೇಟೆಗೆ ಬಲ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಕೊಂಚ ಏರಿಕೆ ದಾಖಲಿಸಿದೆ. ಆಟೋ, ಆಯಿಲ್ ಅಂಡ್ ಗ್ಯಾಸ್, ಬ್ಯಾಂಕಿಂಗ್ ಷೇರುಗಳಿಗೆ ಖರೀದಿಯ ಬೇಡಿಕೆ ಹೆಚ್ಚಿದ್ದರಿಂದ ಷೇರುಪೇಟೆ ಚಿಗಿತುಕೊಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 43.25 ಪಾಯಿಂಟ್ ಅಂದರೆ ಶೇ.0.24ರಷ್ಟು ಏರಿಕೆ ದಾಖಲಿಸಿ 18,445.07ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 53.12 ಪಾಯಿಂಟ್ ಇಳಿಕೆಯಾಗಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 8.45 ಪಾಯಿಂಟ್ ಅಂದರೆ ಶೇ.0.15ರಷ್ಟು ಏರಿಕೆ ಕಂಡು 5,542.10ಕ್ಕೆ ತಲುಪಿದೆ.

ಜಪಾನಿನ ನಿಕ್ಕಿ ಶೇ.0.83ರಷ್ಟು ಇಳಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.38ರಷ್ಟು ಕುಸಿತ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ