ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಜಾಗತಿಕ ಮಾರುಕಟ್ಟೆ ದುರ್ಬಲ; ಇಳಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ಮತ್ತೆ ಕುಸಿತ ಕಂಡಿದೆ. ರಿಯಾಲ್ಟಿ, ಬ್ಯಾಂಕಿಂಗ್, ಮೆಟಲ್ ವಲಯದ ಷೇರುಗಳು ಇಳಿಕೆಯ ಹಾದಿಯಲ್ಲಿದ್ದು ಬಂಡವಾಳಗಳ ಮಾರಾಟ ಜಾಗತಿಕ ಮಾರುಕಟ್ಟೆ ಇಳಿಕೆಗೆ ಕಾರಣವಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 39.33 ಪಾಯಿಂಟ್ ಅಂದರೆ ಶೇ.0.21ರಷ್ಟು ಇಳಿಕೆ ಕಂಡು 18,272.26ಕ್ಕೆ ತಲುಪಿದೆ. ಇದಕ್ಕೂ ಮೊದಲು 97.76 ಪಾಯಿಂಟ್ ಕುಸಿದಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 16.05 ಪಾಯಿಂಟ್ ಕುಸಿದು 5,489.05ಕ್ಕೆ ತಲುಪಿದೆ.

ಇದೇ ವೇಳೆ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.09ರಷ್ಟು ಕೆಳಗಿಳಿದಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1ರಷ್ಟು ಕುಸಿತ ಕಂಡಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.32ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ