ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 132 ಪಾಯಿಂಟ್ ಕುಸಿತ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 132 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 131.95 ಪಾಯಿಂಟ್ ಅಂದರೆ ಶೇ.0.72ರಷ್ಟು ಇಳಿಕೆ ಕಂಡು 18,179.64ಕ್ಕೆ ತಲುಪಿದೆ. ಕಳೆದೆರಡು ವಹಿವಾಟುಗಳಲ್ಲಿ 230 ಪಾಯಿಂಟ್ ಕುಸಿತ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.78ರಷ್ಟು ಇಳಿಕೆ ಕಂಡು 5,462.35ಕ್ಕೆ ತಲುಪಿದೆ.

ಇಳಿಕೆ ಕಂಡ ಷೇರುಗಳ ಪೈಕಿ ಡಿಎಲ್ಎಫ್ ಶೇ.3.35, ಐಸಿಐಸಿಐ ಬ್ಯಾಂಕ್ ಶೇ.1.67, ಎಸ್‌ಬಿಐ ಶೇ.0.82, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.63, ಹೀರೋ ಹೊಂಡಾ ಶೇ.2.32, ಮಾರುತಿ ಶೇ.1.14, ಟಾಟಾ ಮೋಟಾರ್ಸ್ ಶೇ.1.82ರಷ್ಟು ಇಳಿಕೆ ಕಂಡಿವೆ.

ಚೀನಾದ ಶಾಂಘೈ ಸೂಚ್ಯಂಕ ಶೇ.2ರಷ್ಟು ಕುಸಿತ ಕಂಡಿದೆ. ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1.66ರಷ್ಟು ಕುಸಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ