ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಏರಿಕೆ ದಾಖಲಿಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ತನ್ನ ದಿನದಂತ್ಯದ ವಹಿವಾಟಿನಲ್ಲಿ 47 ಪಾಯಿಂಟ್ ಚೇತರಿಕೆ ದಾಖಲಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ 46.71 ಪಾಯಿಂಟ್ ಅಂದರೆ ಶೇ.0.26ರಷ್ಟು ಏರಿಕೆ ಕಂಡು 18,226.35ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.28ರಷ್ಟು ಚೇತರಿಕೆ ದಾಖಲಿಸಿ 5,477.90ಕ್ಕೆ ತಲುಪಿದೆ.

ರಿಯಾಲ್ಟಿ ದೈತ್ಯ ಡಿಎಲ್ಎಫ್ ಶೇ.2.14ರಷ್ಟು ಏರಿಕೆ ಕಂಡರೆ, ಎಚ್‌ಡಿಎಫ್‌ಸಿ ಶೇ.1.3, ಎಸ್‌ಬಿಐ ಶೇ.1.47, ಐಸಿಐಸಿಐ ಬ್ಯಾಂಕ್ ಶೇ.0.2ರಷ್ಟು ಏರಿಕೆ ದಾಖಲಿಸಿದೆ.

ಇಳಿಕೆ ಕಂಡ ಷೇರುಗಳ ಪೈಕಿ ಸಟೆರ್ಲೈಟ್ ಇಂಡಸ್ಟ್ರೀಸ್ ಶೇ.1.23, ಎಚ್‌ಯುಎಲ್ ಶೇ.1.08, ಜಯಪ್ರಕಾಶ್ ಅಸೋಸಿಯೇಟ್ಸ್ ಶೇ.0.9ರಷ್ಟು ಇಳಿಕೆ ಕಂಡಿದೆ.

ಚೀನಾದ ಶಾಂಘೈ ಷೇರುಪೇಟೆ ಶೇ.0.27ರಷ್ಟು ಏರಿಕೆ ಕಂಡಿದೆ. ಜಪಾನ್‌ನ ನಿಕ್ಕಿ ಶೇ.0.69ರಷ್ಟು ಚೇತರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ