ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ದಿಢೀರ್ ಭಾರೀ ಕುಸಿತ; 18,000ಕ್ಕಿಂತ ಕೆಳಗಿಳಿದ ಸೂಚ್ಯಂಕ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಭಾರೀ ಕುಸಿತ ಕಂಡಿದೆ. 228 ಪಾಯಿಂಟ್ ಇಳಿಕೆ ಕಾಣುವ ಮೂಲಕ ಸೂಚ್ಯಂಕ 18,000ಕ್ಕೂ ಕೆಳಗಿಳಿದಿದೆ.

ಬಿಎಸ್ಇ 30 ಷೇರು ಸೂಚ್ಯಂಕ 227.94 ಪಾಯಿಂಟ್ ಅಂದರೆ ಶೇ.1.24ರಷ್ಟು ಇಳಿಕೆಯಾಗಿದ್ದು 17,998.41ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 69.20 ಪಾಯಿಂಟ್ ಅಂದರೆ ಶೇ.1.26ರಷ್ಟು ಕುಸಿತ ಕಂಡು 5,408.70ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 26 ಷೇರುಗಳು ಕುಸಿತ ಕಂಡರೆ, ಉಳಿದ ಷೇರುಗಳು ಏರಿಕೆ ಕಂಡಿವೆ.

ಇಳಿಕೆ ಕಂಡ ಷೇರುಗಳ ಪೈಕಿ ಡಿಎಲ್ಎಫ್ ಶೇ.3.30ರಷ್ಟು ಇಳಿಕೆ ಕಂಡರೆ, ಹೀರೋ ಹೊಂಡಾ ಶೇ.3.18, ಐಸಿಐಸಿಐ ಬ್ಯಾಂಕ್ ಶೇ.2.84, ಟಾಟಾ ಪವರ್ ಶೇ.2.55, ಜಯಪ್ರಕಾಶ್ ಅಸೋಸಿಯೇಟ್ಸ್ ಶೇ.2.40, ಜಿಂದಾಲ್ ಸ್ಟೀಲ್ ಶೇ.2.38, ರಿಲಯನ್ಸ್ ಇನ್‌ಫ್ರಾ ಶೇ.2.17, ಎಸ್‌ಬಿಐ ಶೇ.2.16ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ