ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ 18,000ಕ್ಕಿಂತ ಕೆಳಗಿಳಿದ ಸೂಚ್ಯಂಕ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರದಲ್ಲಿ ಕುಸಿತ ಕಂಡಿದೆ. 18,000ಕ್ಕಿಂತಲೂ ಸೂಚ್ಯಂಕ ಕೆಳಗಿಳಿದಿದೆ.

ವಾರದಲ್ಲಿ ಬಿಎಸ್ಇ 30 ಷೇರು ಸೂಚ್ಯಂಕ 227.94 ಪಾಯಿಂಟ್ ಅಂದರೆ ಶೇ.1.2ರಷ್ಟು ಕುಸಿತ ಕಂಡು 17,998.41ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ವಾರದಲ್ಲಿ ಶೇ.1.26ರಷ್ಟು ಕುಸಿತ ದಾಖಲಿಸಿ 5,408.70ಕ್ಕೆ ತಲುಪಿದೆ.

ಇಳಿಕೆ ಕಂಡ ಷೇರುಗಳ ಪೈಕಿ ಐಸಿಐಸಿಐ ಬ್ಯಾಂಕ್ ಶೇ.2.84ರಷ್ಟು ಇಳಿದಿದೆ. ಎಸ್‌ಬಿಐ ಶೇ.2.16, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.1.7, ಎಚ್‌ಡಿಎಫ್‌ಸಿ ಶೇ.0.8, ಡಿಎಲ್ಎಫ್ ಶೇ.3.30, ಟಿಸಿಎಸ್ ಶೇ.2.10, ವಿಪ್ರೋ ಶೇ.0.88ರಷ್ಟು ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ