ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಪುಟಿದೆದ್ದ ಷೇರುಪೇಟೆ; 120 ಪಾಯಿಂಟ್ ಏರಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಮತ್ತೆ ಪುಟಿದೆದ್ದಿದ್ದು, 120 ಪಾಯಿಂಟ್ ಏರಿಕೆ ಕಂಡಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ ಇಳಿಕೆ ಕಂಡಿದ್ದ ಷೇರುಪೇಟೆಯಲ್ಲಿ ಆಟೋ, ಆಯಿಲ್ ಅಂಡ್ ಗ್ಯಾಸ್, ರಿಯಾಲ್ಟಿ, ಮೆಟಲ್ ಷೇರುಗಳು ಉತ್ತಮ ಕೊಳ್ಳುವಿಕೆಯನನು ಕಾಣುತ್ತಿದ್ದು ಇದು ಏರಿಕೆಗೆ ಕಾರಣವಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 119.90 ಪಾಯಿಂಟ್ ಅಂದರೆ ಶೇ.0.66ರಷ್ಟು ಏರಿಕೆ ಕಂಡು 18,091.02ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನ್ಲಲಿ ಸೂಚ್ಯಂಕ 60.99 ಪಾಯಿಂಟ್ ಕುಸಿದಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 30.55 ಪಾಯಿಂಟ್ ಅಂದರೆ ಶೇ.0.55ರಷ್ಟು ಏರಿಕೆ ಕಂಡು 5,432.95ಕ್ಕೆ ತಲುಪಿದೆ.

ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಸೂಚ್ಯಂಕ ಶೇ.0.10ರಷ್ಟು ಏರಿಕೆ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.15ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.05ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ