ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭರ್ಜರಿ ಏರಿಕೆ ದಾಖಲಿಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 235 ಪಾಯಿಂಟ್ ದಿಢೀರ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 234.75 ಪಾಯಿಂಟ್ ಅಂದರೆ ಶೇ.1.31ರಷ್ಟು ಏರಿಕೆ ದಾಖಲಿಸಿ 18,205.87ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 60.99 ಪಾಯಿಂಟ್ ಕುಸಿತ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 69.45 ಪಾಯಿಂಟ್ ಅಂದರೆ ಶೇ.1.29ರಷ್ಟು ಏರಿಕೆ ದಾಖಲಿಸಿ 5,471.85ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 27 ಷೇರುಗಳು ಏರಿಕೆಯನ್ನೇ ಕಂಡರೆ, ಉಳಿದ ಮೂರು ಷೇರುಗಳು ಇಳಿಕೆ ದಾಖಲಿಸಿವೆ.

ಮೆಟಲ್ ವಲಯದ ಷೇರು ಶೇ.3.02ರಷ್ಟು ಏರಿಕೆ ಕಂಡಿದ್ದು, ಸ್ಟೈರ್‌ಲೈಟ್ ಇಂಡಸ್ಟ್ರೀಸ್ ಉತ್ತಮ ಏರಿಕೆ ದಾಖಲಿಸಿದೆ. ಏರಿಕೆ ಕಂಡ ಪ್ರಮುಖ ಷೇರುಗಳ ಪೈಕಿ ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.4.94, ಹಿಂಡಲ್ಕೋ ಶೇ.4.48, ಭಾರ್ತಿ ಏರ್ಟೆಲ್ ಶೇ.3.10, ಡಿಎಲ್ಎಫ್ ಶೇ.2.47, ರಿಲಯನ್ಸ್ ಇನ್‌ಫ್ರಾ ಶೇ.2.10ರಷ್ಟು ಏರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ